Hare Krishna!!!!!
Tech | Spirituality | Mind | Thoughts | Life | Body | Time | Help | Share | Principles | Belief | Achievments | Inspiration | Friends | PraDeepu(Me) | Bengalooru

Sunday, August 25, 2013

ಜಗದೋದ್ಧಾರನ ಆಡಿಸಿದಳೆಶೋದಾ......Hare Krishna!!

ಜಗದೋದ್ಧಾರನ ಆಡಿಸಿದಳೆಶೋದಾ
ಜಗದೋದ್ಧಾರನ (ಪ)

ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ ಆಡಿಸಿದಳೆಶೋದೆ (ಅ ಪ)

ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳೆ ಯಶೋದೆ (1)

ಅಣೋರಣೀಯನ ಮಹತೋ ಮಹಿಮನ
ಅಪ್ರಮೇಯನ ಆಡಿಸಿದಳೆಶೋದಾ (2)

ಪರಮ ಪುರುಷನ ಪರವಾಸುದೇವನ
ಪುರಂದರ ವಿಠಲನ ಆಡಿಸಿದಳೆಶೋದಾ (3)




Hare Krishna!!!!
Krishna Janmastami 2013 Aug 28th