ತಂಬೂರಿ ಮೀಟಿ ದವ
ಸಿಂಗರ್: ರಾಮ ವರ್ಮ ರಾಗ : ಸಿಂಧು ಭೈರವಿ
ತಂಬೂರಿ ಮೀಟಿ ದವ
ಭವಾಬ್ಡಿ ದಾಟಿದವ ।। ತಂ ।।
ತಾಳವ ತಟ್ಟಿ ದವ
ಸುರರೊಳು ಸೇರಿದವ ।। ತಂ ।।
ಗೆಜ್ಜೆ ಕಟ್ಟಿ ದವ
ಖರಲದೆ ಮೆಟ್ಟಿ ದವ ।। ತಂ ।।
ಗಾಯನ ಪಾಡಿದವ
ಹರಿ ಮೂರ್ತಿ ನೋಡಿದವ ।। ತಂ ।।
ಪುರುಂಧರ ವಿಠಲನ ನೋಡಿದವ
ವೈಕುಂಟಕ್ಕೆ ಓಡಿ ದವ ।। ತಂ ।।