Hare Krishna!!!!!
Tech | Spirituality | Mind | Thoughts | Life | Body | Time | Help | Share | Principles | Belief | Achievments | Inspiration | Friends | PraDeepu(Me) | Bengalooru

Wednesday, August 24, 2016

ಪುರಾಣಮಿತ್ಯೇವ ನ ಸಾಧು ಸರ್ವಂ


ಪುರಾಣಮಿತ್ಯೇವ ನ ಸಾಧು ಸರ್ವಂ
ನ ಚಾಪಿ ಕಾವ್ಯಂ ನವಮಿತ್ಯವದ್ಯಂ
ಸಂತಃ ಪರೀಕ್ಷ್ಯಾನ್ಯತರದ್ಭಜಂತಿ
ಮೂಢಃ ಪರಪ್ರತ್ಯಯನೆಯಬುದ್ಧಿಃ

ನಾನು ಸಣ್ಣವನಿರುವಾಗ ಕಲಿತ ಸಂಸ್ಕೃತ ಶ್ಕೋಕಗಳಲ್ಲಿ ಈಗಲೂ ನೆನಪಿರುವ ಅತ್ಯುತ್ತಮವಾದದ್ದೊಂದು ಇದು. ಈ ಶ್ಲೋಕದ ಅರ್ಥ ಸುಮಾರು ಹೀಗೆ ಬರುತ್ತದೆ

ಹಳೆಯದು ಅಂದ ಮಾತ್ರಕ್ಕೆ ಎಲ್ಲವೂ ಒಳ್ಳೆಯದು ಅಂತ ಅಲ್ಲ
ಹೊಸದು ಅಂದ ಮಾತ್ರಕ್ಕೆ ಎಲ್ಲವೂ ಕೆಟ್ಟದು ಎಂದೂ ಅಲ್ಲ
ಬುದ್ಧಿವಂತರು ತಾವೇ ಪರೀಕ್ಷಿಸಿ ಒಳ್ಳೆಯದನ್ನು ತೆಗೆದುಕೊಳ್ಳುತ್ತಾರೆ

ಮೂಢರು ಬೇರೆಯವರು ಹೇಳಿದ್ದನ್ನು ಅಂಧವಾಗಿ ಅನುಕರಣೆ ಮಾಡುತ್ತಾರೆ

No comments:

Post a Comment